ಹೂವಾಡಗಿತ್ತಿ [Hoovadagitthi]

ರಚನೆ: ಪ್ರೊ. ಎಂ. ವಿ. ಸೀತಾರಾಮಯ್ಯ

ಹೂವನು ಮಾರುತ
ಹೂವಾಡಗಿತ್ತಿ
ಹಾಡುತ ಬರುತಿಹಳು
‘ಘಮಘಮ ಹೂಗಳು
ಬೇಕೇ’ ಎನ್ನುತ
ಹಾಡುತ ಬರುತಿಹಳು

ಬಿಳುಪಿನ ಮಲ್ಲಿಗೆ
ಹಳದಿಯ ಸಂಪಿಗೆ
ಹಸುರಿನ ಹೊಸ ಮರುಗ;
ಹಾಕಿ ಕಟ್ಟಿರುವೆ
ಬೇಕೇ ಎನುತ
ಹಾಡುತ ಬರುತಿಹಳು

ಹೊಸ ಸೇವಂತಿಗೆ
ಹೊಸ ಇರುವಂತಿಗೆ
ಅರಸಿನ ತಾಳೆಯಿದೆ;
ಅಚ್ಚ ಮಲ್ಲೆಯಲಿ
ಪಚ್ಚ ತೆನೆಗಳು
ಸೇರಿದ ಮಾಲೆಯಿದೆ.

ಕಂಪನು ಚೆಲ್ಲುವ
ಕೆಂಪು ಗುಲಾಬಿ
ಅರಳಿದ ಹೊಸ ಕಮಲ;
ಬಿಳುಪಿನ ಜಾಜಿ
ಅರಳಿದ ಬಿಳಿ ಕಮಲ.

ಬಗೆ ಬಗೆ ಹೂಗಳು
ಬೇಕೇ ಎನುತ
ಹಾಡುತ ಬರುತಿಹಳು;
ಹೂವನು ಮಾರುತ
ಹೂವಾಡಗಿತ್ತಿ
ಹಾಡುತ ಬರುತಿಹಳು.
ಹೂವಾಡಗಿತ್ತಿ [Hoovadagitthi] ಹೂವಾಡಗಿತ್ತಿ [Hoovadagitthi] Reviewed by RK on ಆಗಸ್ಟ್ 15, 2021 Rating: 5

ಕಾಮೆಂಟ್‌ಗಳಿಲ್ಲ:

Submit Your Joke

ಹೆಸರು

ಇಮೇಲ್ *

ಸಂದೇಶ *

Blogger ನಿಂದ ಸಾಮರ್ಥ್ಯಹೊಂದಿದೆ.