ಗಾಳಿಪಟ [Galipata]

ಅಣ್ಣನು ಮಾಡಿದ ಗಾಳಿಪಟ
ಬಣ್ಣದ ಹಾಳೆಯ ಗಾಳಿಪಟ

ನೀಲಿಯ ಬಾನಲಿ
ತೇಲುವ ಸುಂದರ
ಬಾಲಂಗೋಚಿಯ ನನ್ನ ಪಟ

ಬಿದಿರಿನ ಕಡ್ಡಿಯ ಗಾಳಿಪಟ
ಬೆದರದ ಬೆಚ್ಚದ ಗಾಳಿಪಟ

ದಾರವ ಜಗ್ಗಿ
ದೂರದಿ ಬಗ್ಗಿ
ತಾರೆಯ ನಗಿಸುವ ನನ್ನ ಪಟ

ಉದ್ದದ ಬಾಲದ ಗಾಳಿಪಟ
ನನ್ನಯ ಮುದ್ದಿನ ಗಾಳಿಪಟ
ಗಾಳಿಪಟ [Galipata] ಗಾಳಿಪಟ [Galipata] Reviewed by RK on ಆಗಸ್ಟ್ 15, 2021 Rating: 5

ಕಾಮೆಂಟ್‌ಗಳಿಲ್ಲ:

Submit Your Joke

ಹೆಸರು

ಇಮೇಲ್ *

ಸಂದೇಶ *

Blogger ನಿಂದ ಸಾಮರ್ಥ್ಯಹೊಂದಿದೆ.