ಸ್ವಾತಂತ್ರ್ಯ ದಿನದ ಶುಭಾಶಯಗಳು [Happy Independence Day Wishes /Greetings /Quotes in Kannada]

Happy Independence Day Wishes /Greetings /Quotes in Kannada

ದೇಶವನ್ನು ಬ್ರಿಟಿಷರ ದಾಸ್ಯದಿಂದ ಬಿಡಿಸುವ ಸಲುವಾಗಿ ತಮ್ಮ ಜೀವವನ್ನೇ ಬಲಿದಾನವಾಗಿ ನೀಡಿದ ಎಲ್ಲಾ ತ್ಯಾಗಿಗಳನ್ನು ನಾವೆಲ್ಲರೂ ಸ್ಮರಿಸೋಣ. ಎಲ್ಲರಿಗೂ ಸ್ವಾತಂತ್ರ್ಯ ದಿನದ ಶುಭಾಶಯಗಳು.
Happy Independence Day Wishes /Greetings /Quotes in Kannada

ನನ್ನ ರಾಷ್ಟ್ರದ ಮೇಲಿನ ನನ್ನ ಪ್ರೀತಿಗೆ ಮಿತಿಯಿಲ್ಲ. ನನ್ನ ಜನರ ಮೇಲಿನ ನನ್ನ ಪ್ರೀತಿಗೆ ಕೊನೆಯಿಲ್ಲ. ನನ್ನ ದೇಶದ ಸಂತೋಷವನ್ನು ನಾನು ಸದಾ ಬಯಸುತ್ತೇನೆ. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಸ್ವಾತಂತ್ರ್ಯೋತ್ಸವದ ಶುಭಾಶಯಗಳು.

Happy Independence Day Wishes /Greetings /Quotes in Kannada

ಭಾರತ ಮಾತೆಯನ್ನು ದಾಸ್ಯದ ಸಂಕೋಲೆಯಿಂದ ಬಿಡಿಸಲು ಹಗಳಿರುಳು ಶ್ರಮಿಸಿದ, ಕಷ್ಟಗಳನ್ನು ಎದುರಿಸಿದ, ತಮ್ಮ ಬದುಕನ್ನೇ ಮುಡಿಪಾಗಿಟ್ಟ ರಾಷ್ಟ್ರಭಕ್ತರಿಗೆ ನಾವೆಲ್ಲರೂ ಗೌರವ ಸಲ್ಲಿಸಬೇಕಾದ ದಿನವಿಂದು. ಇವರ ಸೇವೆ ಸದಾ ಅಮರ. ಎಲ್ಲರಿಗೂ ಸ್ವಾತಂತ್ರ್ಯ ದಿನದ ಶುಭಾಶಯಗಳು.

Happy Independence Day Wishes /Greetings /Quotes in Kannada


ಈ ಸ್ವಾತಂತ್ರ್ಯ ಅದೆಷ್ಟೋ ಹೋರಾಟಗಾರರ ತ್ಯಾಗದ ಫಲ. ಕೆಚ್ಚೆದೆಯ ವೀರರು, ಅಪ್ರತಿಮ ರಾಷ್ಟ್ರಭಕ್ತರು ತಂದುಕೊಟ್ಟ ಈ ಸ್ವಾತಂತ್ರ್ಯವನ್ನು ಗೌರವಿಸೋಣ. ಹಿರಿಯರು ಹಾಕಿಕೊಟ್ಟ ರಾಷ್ಟ್ರಪ್ರೇಮದ ದಾರಿಯಲ್ಲಿ ಮುಂದೆ ಸಾಗೋಣ. ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.
Happy Independence Day Wishes /Greetings /Quotes in Kannada

ಅಸಂಖ್ಯಾತ ತ್ಯಾಗಿಗಳ ಹೋರಾಟದ ಫಲವಾಗಿ ನಾವಿಂದು ಸ್ವತಂತ್ರರಾಗಿದ್ದೇವೆ. ಸ್ವಾತಂತ್ರ್ಯವನ್ನು ಪಡೆಯುವುದು ಸುಲಭವಲ್ಲ. ಆದರೆ, ನಾವು ಇಂದು ಈ ಸ್ವಾತಂತ್ರ್ಯವನ್ನು ಅನುಭವಿಸುವ ಅದೃಷ್ಟಶಾಲಿಗಳಾಗಿದ್ದೇವೆ. ಕೆಚ್ಚೆದೆಯ ವೀರರನ್ನು ಇಂದು ನಾವೆಲ್ಲಾ ಸ್ಮರಿಸೋಣ. ಅವರು ತಂದುಕೊಟ್ಟ ಸ್ವಾತಂತ್ರ್ಯದ ದಿನವನ್ನು ಗೌರವದಿಂದ ಆಚರಿಸೋಣ. ಸರ್ವರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.

Happy Independence Day Wishes /Greetings /Quotes in Kannada


ಆಗಸ್ಟ್‌ 15 ಭಾರತೀಯರ ಪಾಲಿನ ಸುದಿನ. ಈ ಶುಭ ದಿನವನ್ನು ನಾವು ಹೆಮ್ಮೆಯಿಂದ ಆಚರಿಸಬೇಕು. ನಮ್ಮ ಜೀವನದ ಕಣಕಣದಲ್ಲೂ ದೇಶಭಕ್ತಿ ಜಾಗೃತವಾಗಿರಬೇಕು. ಸರ್ವರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.


ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟ ಎಲ್ಲಾ ಸಮರ ಸೇನಾನಿಗಳಿಗೆ ಸೆಲ್ಯೂಟ್. ಹ್ಯಾಪಿ ಇಂಡಿಪೆಂಡೆನ್ಸ್‌ ಡೇ.


ಬೀಗುತ್ತಿರು ನೀನು ಉಸಿರಿರುವ ತನಕ ಭಾರತೀಯನೆಂದು,
ಕೂಗುತ್ತಿರು ನೀನು ಕೊನೆಯುಸಿರಿರುವ ತನಕ ಒಂದೇ ಮಾತರಂ ಎಂದು…

ದಾಸ್ಯದ ನೆರಳಲಿ, ಜೀವನ ದುಸ್ತರ, ನೆತ್ತರ ಹರಿವಿಗೆ ,
ಕೊನೆಗೂ ದಕ್ಕಿದೆ ಉತ್ತರ, ಬಲಿದಾನದ ಬಲವಿದು,
ಸಹನೆಯ ಫಲವಿದು,ಅಭಿಮಾನದ ತಿರಂಗವು ಹಾರಲಿ ಮುಗಿಲೆತ್ತರ…

ಇಂದಿನ ಸ್ವಾತಂತ್ರ್ಯಕ್ಕಾಗಿ ಎಷ್ಟೋ ಹೋರಾಟ,ತ್ಯಾಗ ಬಲಿದಾನಗಳಿಗೆ
ಮನಸ್ಸಿನ ಸ್ವಾತಂತ್ರ್ಯಕ್ಕಾಗಿ ಪ್ರತಿದಿನ ಹೋರಾಟ ನಡೆಸಬೇಕಿದೆ…

ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಬದುಕನ್ನೇ
ಮುಡುಪಾಗಿಟ್ಟ ಎಲ್ಲ ಸಮರ ಸೇನಾನಿಗಳಿಗೆ ಸಲ್ಯೂಟ್
ಎದೆ ತಟ್ಟಿಕೊಂಡು ಹೇಳು ನಾನು ಭಾರತೀಯನೆಂದು ಜೈಹಿಂದ್

ಜಾತಿಭೇದವನ್ನು ತೋರೆಯುತ್ತಾ, ಎಲ್ಲರ ಮನದಲ್ಲಿ ಪ್ರೀತಿ ಸೌಹಾರ್ದತೆ ಅಚ್ಚೇಳೆಯುತ್ತ,
ಇಂದಿಗೂ ಒಂದು ಕೂಡಿ ಬಾಳುವೆವು ಎಂಬ ಹೊಸ ಮಂತ್ರವನ್ನು ಸಾರುತ್ತ,
75ನೇ ಸ್ವಾತಂತ್ರ್ಯೋತ್ಸವವನ್ನು ಅಚ್ಚ ಮನಸ್ಸಿನಿಂದ ಆಚರಿಸೋಣ

ಉದಯಿಸಲಿ ಮತ್ತೊಮ್ಮೆ ಸ್ವಾತಂತ್ರ್ಯದ ಸೂರ್ಯ..
ನೆನಪಿಸುತ್ತ ಸಂಗ್ರಾಮದ ಮಡಿದವರ ಶೌರ್ಯ ..
ಭರತ ಭೂಮಿ ಯುದ್ಧಗಲಕ್ಕೂ ಹಾರಲಿ ತಿರಂಗ..
ಮನೆ-ಮನದಲ್ಲಿ ಪುಟಿದೇಳಲಿದೆ ದೇಶಭಕ್ತಿಯ ತರಂಗ…

ಗಾಂಭೀರ್ಯದ ಘರ್ಜನೆ ಇದು ಪುಟಿದೇಳುವ ತ್ರಿವರ್ಣಧ್ವಜದ
ಭವ್ಯತೆಯಲ್ಲಿ ಮುಗಿದೇಳಲಿ ಡಿಂಡಿಮದ ಸ್ವತಂತ್ರ ಭಾರತದಲಿ
ರಾರಾಜಿಸಲಿ ಭವ್ಯ ಭಾರತದ ಸ್ವಾತಂತ್ರ್ಯ ದಿನದಲ್ಲಿ..

ದೇಶಪ್ರೇಮ ಬಾಂಧವ್ಯ ಮಮತೆ ಇವುಗಳ ಸಂಕೇತ,
ಆದರೆ ದ್ವೇಷ ಇವುಗಳನ್ನೆಲ್ಲ ಚೂರು ಮಾಡುವ ಆಯುಧ,
ದ್ವೇಷವನ್ನು ಬಿಟ್ಟು ದೇಶಪ್ರೇಮ ಬೆಳೆಸಿಕೊಳ್ಳಿ..

ಹೂತೋಟದಲ್ಲಿ ಅನೇಕ ರೀತಿಯ ಹೂಗಳಿದ್ದರೆ ಮಾತ್ರ , ಅದನ್ನು ಹೂತೋಟ ಅನ್ನುತ್ತಾರೆ .
ಅದೇ ರೀತಿ ಭಾರತ ಸರ್ವ ಧರ್ಮಗಳನ್ನು ಒಳಗೊಂಡ ವಿಶಾಲವಾದ ದೇಶ,
ಈ ದೇಶದಲ್ಲಿ ಹುಟ್ಟಿದ ಪ್ರತಿಯೊಬ್ಬ ಪ್ರಜೆಯು ಭಾಗ್ಯವಂತರು,
ಯಾಕೆಂದರೆ ಇದು ಪವಿತ್ರವಾದ ದೇಶ…

ಎಷ್ಟೋ ಜನರ ತ್ಯಾಗ ಬಲಿದಾನಗಳು
ನಮಗೆ ನೀಡಿದೆ ಸ್ವಾತಂತ್ರ್ಯದ ದಿನಗಳು,
ಈ ಸುಂದರ ಕ್ಷಣಗಳಲ್ಲಿ ಇಂದು ಅವರನ್ನೆಲ್ಲರನ್ನು ಸ್ಮರಿಸುತ್ತಾ ,
ಅವರಿಗೆ ಸಲ್ಲಿಸುವೆ ಶಿರಬಾಗಿ ನನ್ನ ಕೋಟಿ ನಮನಗಳು…

ಹೇಗೆ ಒಂದು ದಿನ ಪ್ರತಿಯೊಬ್ಬರ ಸ್ಟೇಟಸ್ ಹಾಗೂ dp ಯಲ್ಲಿ
ದೇಶಭಕ್ತಿಯು ಉಕ್ಕಿ ಹರಿಯುತ್ತದೆಯೋ, ದೇಶದೊಳಗಿನ ಭ್ರಷ್ಟ ವ್ಯವಸ್ಥೆಯ
ವಿರುದ್ಧ ಧ್ವನಿಯೆತ್ತುವ ಧೈರ್ಯವು, ಪ್ರತಿಯೊಬ್ಬರಲ್ಲೂ ಪ್ರತಿದಿನ
ಅದೇ ರೀತಿಯಲ್ಲಿ ಉಕ್ಕಿ ಹರಿಯಲಿ….

ತಾಯಿ ಭಾರತಿ ದಾಸ್ಯದಿಂದ ಮುಕ್ತಳಾದ ದಿನ
ಏಕತೆ ಸಾರುವ ನಾವು ಬಿಟ್ಟು ಜಾತಿ-ಮತದ ಬಣ,
ಉಸಿರಿರುವ ತನಕ ಭಾರತೀಯನೆಂದು ಬೀಗು,
ಕೊನೆಯುಸಿ ರೇಳೆಯುವಾಗಲು ಒಂದೇ ಮಾತರಂ ಎಂದು ಕೂಗು…

ಒಂದು ಕಡೆ ಹುಡುಗಿಯರೆಲ್ಲ ಸಾರಿಸಿ ಗುಡಿಸಿ
ರಂಗೋಲಿ ಹಾಕೊಂಡು ನಿಂತಿದ್ದರೆ,
ನಾವು ಹುಡುಗರು ಊರೆಲ್ಲಾ ಅಲೆದು ಹೂಗಳನ್ನು
ತಂದು ಅಲಂಕರಿಸಿ ಎಲ್ಲರೂ ಮನಸ್ಪೂರ್ವಕವಾಗಿ ದ್ವಜ ಹಾರಿಸುತ್ತಿದ್ದೇವು….

ಪಸರಿಸಲಿ ತರಂಗದ ಕಾಂತಿ ಎಲ್ಲೆಡೆ ತೊಲಗಲಿ
ಅಶಾಂತಿಯ ಅಂಧಕಾರ ಎಂದಿಗೂ ಕೇಳಲಿ
ನಮ್ಮ ಎದೆಯಲಿ ಜನಗಣಮನ ಗೀತೆಯ ಝೇಂಕಾರ,
ಸ್ವಾಭಿಮಾನ ಮೆರೆದ ನೆಲದಲ್ಲಿ ನಿಂತು ಹೇಳಿ ಆಗಲಿದೆ ಭಾರತ ಆತ್ಮ ನಿರ್ಭರ….

ತನ್ನ ಆಕಾಂಕ್ಷೆಗಳ ಬದಿಗಿಟ್ಟು ದೇಶಕ್ಕಾಗಿ ತನ್ನನ್ನು ಸಮರ್ಪಿಸಿಕೊಂಡು,
ಸೈನಿಕ ಧರ್ಮಗಳ ಕಾದಾಟ ನೋಡಿ, ತನ್ನ ಶ್ರಮಕ್ಕೆ ಬೆಲೆ ಇಲ್ಲದಾಯಿತೆ? ಎಂದು ಆಗುವ ಭಾವುಕ…
ರಾರಾಜಿಸಲಿ ದೇಶಾಭಿಮಾನ ಎಲ್ಲರ ಮನೆ ಮನಗಳಲ್ಲಿ ..
ಅಖಂಡ ಭಾರತದ ಜಯಭೇರಿ ಜಗತ್ತಿನಾದ್ಯಂತ ಮೊಳಗಲಿ

ಜನ್ಮ ಕೊಟ್ಟ ತಾಯಿಗೆ ಆಶ್ರಯ ಕೊಟ್ಟ
ಭಾರತಮಾತೆಗೆ ಎಂದು ವಂಚಿಸಬೇಡ,
ಕೊನೆ ಉಸಿರಿರೋವರೆಗೂ ನಿನ್ನ ದೇಶವನ್ನು ಮರೆಯಬೇಡ…
ಜಗತ್ತಿನ ಎಲ್ಲ ದೇವರಿಗೆ ತಲೆ ತಗ್ಗಿಸಿ ನಮಸ್ಕರಿಸುತ್ತೇವೆ ,
ಆದರೆ ಈ ದೇವರಿಗೆ ತಲೆಯೆತ್ತಿ ನಮಸ್ಕರಿಸುತ್ತೇವೆ
ಯಾಕೆಂದರೆ ಈ ದೇವರು ಹೇಳುತ್ತದೆ ,
ನನ್ನ ಭಕ್ತರು ಯಾವತ್ತೂ ತಲೆತಗ್ಗಿಸ ಬಾರದು ಅಂತ…

ಸ್ವಾತಂತ್ರ್ಯ ಎನ್ನುವುದು ಬಹುದೊಡ್ಡ ಆಸ್ತಿ, ಅದು ಕಳೆದು ಹೋಗುವವರೆಗೂ
ಅದರ ಬೆಲೆ ಅರ್ಥವಾಗುವುದಿಲ್ಲ, ಒಮ್ಮೆ ಅದು ಕಳೆಯಿತೆಂದರೆ ಮತ್ತೆ ಅದನ್ನು
ಪಡೆಯಲು ಅದರ ಹತ್ತರಷ್ಟು ಬೆಲೆ ಕಟ್ಟಬೇಕಾಗುತ್ತದೆ.. 

ಲಕ್ಷಾಂತರ ಹೋರಾಟಗಾರರ ಶ್ರಮ ನೀಡಿತು ನಮಗೆ
ಸ್ವಾತಂತ್ರ್ಯದ ಸಂಭ್ರಮ ದೇಶಕ್ಕಾಗಿ ಒಳಿತು ಮಾಡುವುದು ಧರ್ಮ
ಆಗ ಶ್ರೇಷ್ಟವಾಗುವುದು ನಮ್ಮ ಜನ್ಮ…

ನಮಗೆ ಸ್ವಾತಂತ್ರ್ಯ ಬಂದರೂ ಏನು ಫಲ ,
ನಾವಿನ್ನೂ ರಾಜಕಾರಣಿಗಳ ಗುಲಾಮರಾಗಿ ಇರುವಾಗ

ನೀವು ಜಗತ್ತಿನಲ್ಲಿ ಏನು ಬದಲಾವಣೆ ಬಯಸುತ್ತಿರುವ
ಅದಕ್ಕೆ ನೀವೇ ಮೊದಲಿಗರಾಗಿ- ಮಹಾತ್ಮ ಗಾಂಧೀಜಿ

ಸ್ವಾತಂತ್ರ್ಯ ಎನ್ನುವುದು ಸಮಾನತೆಯ ಮೇಲೆ ನಿಂತಿದೆ,
ಎಲ್ಲಿ ತನಕ ನಾನು ಸಮಾನತೆ ಸಾಧಿಸುವುದಿಲ್ಲವೂ ಅಲ್ಲಿಯತನಕ ನಾವ್ಯಾರು ಸ್ವಾತಂತ್ರ್ಯರಲ್ಲ…-ಅಂಬೇಡ್ಕರ್

ಸ್ವಾತಂತ್ರ್ಯ ದಿನದ ಶುಭಾಶಯಗಳು [Happy Independence Day Wishes /Greetings /Quotes in Kannada] ಸ್ವಾತಂತ್ರ್ಯ ದಿನದ ಶುಭಾಶಯಗಳು [Happy Independence Day Wishes /Greetings /Quotes in Kannada] Reviewed by RK on ಆಗಸ್ಟ್ 09, 2021 Rating: 5

ಕಾಮೆಂಟ್‌ಗಳಿಲ್ಲ:

Submit Your Joke

ಹೆಸರು

ಇಮೇಲ್ *

ಸಂದೇಶ *

Blogger ನಿಂದ ಸಾಮರ್ಥ್ಯಹೊಂದಿದೆ.