ಗೆಳತೀ,
ನಿನ್ನ ಮೋಹಕ ನಗೆ
ಅನಿವಾರ್ಯವಾಗಿ ಬೇಕಾಗಿದೆ..
ಪ್ರೇಮಕವಿತೆಗಳಿಗೆ
ಬೇಡಿಕೆ ಬಂದಿದೆ
-ಗೋಪಿ [ಹೊಸ ದಿಗಂತ, 30.09.2012]
ನಿದ್ರೆಗೆ
ವಿರುದ್ಧ ಪದ;
ಅವನಿದ್ರೆ!
ಅರಳಿದ ಹೂವುಗಳನ್ನು ಮಾತ್ರ
ದುಂಬಿಗಳು ಮುಟ್ಟುತ್ತವೆ ನಲ್ಲ!
ಆದರೆ ನೀನು ಮುಟ್ಟದೆ
ನಾನು ಅರಳುವುದೇ ಇಲ್ಲ!
-ಸಿ. ಪಿ. ಕೆ
ಅವಳ ಜೊತೆಗೆ ಓದಿದ ತರಗತಿ
ಎಂಟು ಒಂಬತ್ತು ಹತ್ತು,
ನನ್ನ ನವಯೌವ್ವನದ
ಚಿಗುರು ಮೀಸೆಯ ಗತ್ತು,
ಕೇಳಿಸಿಯೇ ಬಿಟ್ಟಿತು
ಅವಳ ಬಳಿ ಒಂದು ಮುತ್ತು,
ಮುತ್ತಿನ ಮತ್ತು ಅರುವಷ್ಟರಲ್ಲಿ,
ಯಾವ ದೇವರ ಕರಮತ್ತೋ..
ಯಾವುದೋ ಮದುವೆ ಆಲ್ಬಮ್ ನಲ್ಲಿ ನಮ್ಮಿಬರದೇ ಫೋಟೋ ಮುಖಪುಟವಾಗಿತ್ತು.....
-ರತೀಶ್ ಕುಮಾರ್ [14.09.2012]
ಪ್ರೇಮ ಹನಿಗವನಗಳು [Kannada Short Love Poems]
Reviewed by RK
on
ಆಗಸ್ಟ್ 11, 2021
Rating:
ಕಾಮೆಂಟ್‌ಗಳಿಲ್ಲ: