ಚಿತ್ರ: ವೀರ ಕೇಸರಿ
ರಚನೆ: ಸೋರಟ್ ಅಶ್ವಥ್
ಸಂಗೀತ: ಘಂಟಸಾಲ
ಗಾಯಕ: ಘಂಟಸಾಲ
ಸ್ವಾಭಿಮಾನದ ನಲ್ಲೆ
ರಚನೆ: ಸೋರಟ್ ಅಶ್ವಥ್
ಸಂಗೀತ: ಘಂಟಸಾಲ
ಗಾಯಕ: ಘಂಟಸಾಲ
ಸ್ವಾಭಿಮಾನದ ನಲ್ಲೆ
ಸಾಕು ಸಂಯಮ ಬಲ್ಲೆ
ಹೊರಗೆ ಸಾಧನೆ ಒಳಗೆ ವೇದನೆ ಇಳಿದು ಬಾ ಬಾಲೆ
ಸ್ವಾಭಿಮಾನದ ನಲ್ಲೆ ||
ಮೂಡಿ ಚಂದಿರ ನಿನಗಾಗಿ
ಮೂಡಿ ಚಂದಿರ ನಿನಗಾಗಿ
ಕೂಡಿ ತಂಬೆಲರೆನಗಾಗಿ
ಮೂಡಿ ಚಂದಿರ ನಿನಗಾಗಿ
ಕೂಡಿ ತಂಬೆಲರೆನಗಾಗಿ
ನೋಡು ಪ್ರಿಯತಮೆ ಹಾಲು ಹುಣ್ಣಿಮೆ ತಂದ ನಮಗಾಗಿ
ಸ್ವಾಭಿಮಾನದ ನಲ್ಲೆ ||
ಓ ……..
ನಿನ್ನ ಗರ್ವದ ಹುಸಿ ಮೌನ
ಓ ……..
ನಿನ್ನ ಗರ್ವದ ಹುಸಿ ಮೌನ
ಅಣಿಕಿಸದೆ ನಾ ಬಿಡೆ ನಿನ್ನ
ನಿನ್ನ ಗರ್ವದ ಹುಸಿ ಮೌನ
ಅಣಿಕಿಸದೆ ನಾ ಬಿಡೆ ನಿನ್ನ
ಪುರುಷ ಸಿಂಹ ನಾ ಬಾಹು ಬಂಧನ ನಿನ್ನ ಕಲ್ಯಾಣ
ಸ್ವಾಭಿಮಾನದ ನಲ್ಲೆ ||
ಓ ……..
ತುಂಬು ಹರೆಯದ ಹೊಸ ಹೆಣ್ಣೀ
ತುಂಬು ಹರೆಯದ ಹೊಸ ಹೆಣ್ಣೀ
ಒಲೆಯ ಮೇಲಿನ ಹಸಿ ಬೆಣ್ಣೆ
ಏಕೆ ಸುಮ್ಮನೇ ಆತ್ಮ ವಂಚನೆ ನಿನ್ನ ಪತಿ ನಾನೇ
ಸ್ವಾಭಿಮಾನದ ನಲ್ಲೆ
ಸಾಕು ಸಂಯಮ ಬಲ್ಲೆ
ಹೊರಗೆ ಸಾಧನೆ ಒಳಗೆ ವೇದನೆ ಇಳಿದು ಬಾ ಬಾಲೆ
ಸ್ವಾಭಿಮಾನದ ನಲ್ಲೆ ||
ಸ್ವಾಭಿಮಾನದ ನಲ್ಲೆ [Swabhimaanada Nalle]
Reviewed by RK
on
ಅಕ್ಟೋಬರ್ 10, 2021
Rating:
ಕಾಮೆಂಟ್‌ಗಳಿಲ್ಲ: