ನವರಾತ್ರಿ ದಸರಾ ಹಬ್ಬದ ಶುಭಾಶಯಗಳು [Happy Navaratri Wishes / Quotes / Messages / Greetings / Status in Kannada]

ನವರಾತ್ರಿಯ ಈ ಶುಭ ಸಂದರ್ಭದಲ್ಲಿ ನಿಮ್ಮ ಪ್ರೀತಿಪಾತ್ರರು, ಕುಟುಂಬದವರು, ಆತ್ಮೀಯರೊಂದಿಗೆ ಹಂಚಿಕೊಳ್ಳುವ ಕೆಲ ಶುಭಾಶಯದ ಸಂದೇಶಗಳು ಇಲ್ಲಿವೆ.

Happy Navaratri Wishes / Quotes / Messages / Greetings / Status in Kannada



ದೇವಿ ದುರ್ಗೆಯು ನಿಮಗೆ ಶಾಶ್ವತ ಸಮೃದ್ಧಿ ಮತ್ತು ಶಾಂತಿ, ನೆಮ್ಮದಿಯ ಹಾದಿಯನ್ನು ತೋರಿಸಲಿ. ದೇವರ ಆಶೀರ್ವಾದದ ಪ್ರಭೆಯಲ್ಲಿ ನಿಮ್ಮ ಕಷ್ಟಗಳೆಲ್ಲಾ ಕೊನೆಯಾಗಲಿ. ಸರ್ವರಿಗೂ ನವರಾತ್ರಿಯ ಹಾರ್ದಿಕ ಶುಭಾಶಯಗಳು

ದುರ್ಗೆಯ ಆಶೀರ್ವಾದದ ಬೆಳಕಿನಲ್ಲಿ ನಿಮ್ಮ ಮನೆ, ಮನಗಳಲ್ಲಿ ಸದಾ ಸಂತಸ ತುಂಬಿರಲಿ. ನಿಮ್ಮ ಜೀವನದಲ್ಲಿ ಎದುರಾಗುವ ಎಲ್ಲಾ ಕಷ್ಟಗಳನ್ನು ಎದುರಿಸುವ ಮತ್ತು ಕೆಟ್ಟದ್ದನ್ನು ಸೋಲಿಸುವ ಶಕ್ತಿಯನ್ನು ದೇವರು ಅನುಗ್ರಹಿಸಲಿ ಎಂಬ ಹಾರೈಕೆ ನನ್ನದು. ಎಲ್ಲರಿಗೂ ನವರಾತ್ರಿಯ ಶುಭಾಶಯಗಳು

ನಿಮ್ಮ ಎಲ್ಲಾ ಕಷ್ಟ, ಚಿಂತೆಗಳನ್ನು ಮರೆತು ಬಿಡಿ. ಮುಖದ ಮೇಲೆ ಹೂನಗೆಯನ್ನು ಚೆಲ್ಲಿ. ಯಾಕೆಂದರೆ, ತಮ್ಮ ಆಶೀರ್ವಾದದ ಮಳೆಯಿಂದ ನಿಮ್ಮ ಜೀವನವನ್ನು ಇನ್ನಷ್ಟು ಖುಷಿಯಿಂದ ತುಂಬಿಸಲು ನವದುರ್ಗೆಯರು ಬರುತ್ತಿದ್ದಾರೆ. ಎಲ್ಲರಿಗೂ ನವರಾತ್ರಿ ಹಬ್ಬದ ಶುಭಾಶಯಗಳು

ದುರ್ಗಾ ಪೂಜೆಯು ನಮ್ಮ ಬದುಕಿನಲ್ಲಿ ಸಂತೋಷದಿಂದ ಮುನ್ನಡೆಯಲು ಹೃದಯ ಮತ್ತು ಮನಸ್ಸಿನಲ್ಲಿ ಸಕಾರಾತ್ಮಕತೆ ಮತ್ತು ಉತ್ಸಾಹವನ್ನು ತುಂಬುತ್ತದೆ. ಈ ನವರಾತ್ರಿ ಶುಭ ಸಂದರ್ಭದಲ್ಲಿ ಸರ್ವರ ಪ್ರಾಮಾಣಿಕ ಪ್ರಾರ್ಥನೆಯನ್ನು ದೇವರು ಆಲಿಸಲಿ ಎಂಬ ಹಾರೈಕೆ ನನ್ನದು. ಎಲ್ಲರಿಗೂ ಹಬ್ಬದ ಹಾರ್ದಿಕ ಶುಭಾಶಯಗಳು

ನವದುರ್ಗೆಯರು ತಮ್ಮ ಆಶೀರ್ವಾದಗಳಿಂದ ಕೀರ್ತಿ, ಆರೋಗ್ಯ, ಸಾಧಿಸುವ ಛಲ, ಸಂಪತ್ತು, ನೆಮ್ಮದಿ, ಮಾನವೀಯ ಗುಣ, ಜ್ಞಾನ, ಭಕ್ತಿ, ಶಕ್ತಿಯನ್ನು ನಿಮಗೆ ಕರುಣಿಸಲಿ. ಸರ್ವರಿಗೂ ಸನ್ಮಂಗಳವನ್ನುಂಟು ಮಾಡಲಿ ದಸರಾ ಹಬ್ಬ

ಎಲ್ಲಾ ಕಷ್ಟಗಳಿಂದಲೂ ನಿಮ್ಮನ್ನು ಹಾಗೂ ನಿಮ್ಮ ಕುಟುಂಬವನ್ನು ನವದುರ್ಗೆಯರು ರಕ್ಷಿಸಲಿ. ನವರಾತ್ರಿಯ ಉತ್ಸವ ನಿಮ್ಮ ಬದುಕಿನಲ್ಲಿ ಸದಾ ಖುಷಿಯ ರಂಗನ್ನೇ ಚೆಲ್ಲಲಿ. ಎಲ್ಲರಿಗೂ ಸಂಭ್ರಮದ ನವರಾತ್ರಿ ಹಬ್ಬದ ಶುಭಾಶಯಗಳು

ದುರ್ಗೆಯ ಮೇಲಿನ ಅನನ್ಯ ನಂಬಿಕೆ, ಭಕ್ತಿಯಿಂದ ಶಾಶ್ವತವಾದ ಸಂತೋಷ, ಯಶಸ್ವಿ ಜೀವನ ನಿಮ್ಮದಾಗಲಿ. ಮಾತೆಯ ಆಶೀರ್ವಾದದ ಪ್ರಭೆಯಲ್ಲಿ ನಿಮ್ಮ ಬದುಕು ಬೆಳಗಲಿ. ಸರ್ವರಿಗೂ ದಸರಾ ಹಬ್ಬದ ಶುಭಾಶಯಗಳು

ಕತ್ತಲೆಯನ್ನು ಬೆಳಕಾಗಿ, ಸಂಕಟವನ್ನು ಸಂತಸದ ಕ್ಷಣವನ್ನಾಗಿ ಬದಲಾಯಿಸುವ ಶಕ್ತಿ ಈ ಹಬ್ಬಕ್ಕಿದೆ. ನವದುರ್ಗೆಯರು ಎಲ್ಲೆಲ್ಲೂ ಸಂತೋಷ, ನೆಮ್ಮದಿಯನ್ನು ತರಲಿ. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ನವರಾತ್ರಿ ಶುಭಾಶಯಗಳು

ನವದುರ್ಗೆಯರ ಆಶೀರ್ವಾದದಿಂದ ನಿಮ್ಮ ಎಲ್ಲಾ ಪ್ರಾಮಾಣಿಕ ಪ್ರಯತ್ನಗಳಲ್ಲಿ ಯಶಸ್ವು ಸಿಗಲಿ. ನಿಮ್ಮ ಕುಟುಂಬದಲ್ಲಿ ಸದಾ ಹರುಷದ ಹೊಳೆಯೇ ಹರಿಯುತ್ತಿರಲಿ. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ನವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು

ಲೋಕ ಕಲ್ಯಾಣಕ್ಕಾಗಿ ತಾಯಿ ದುರ್ಗೆಯು ಭೂಮಿಗೆ ಭೇಟಿ ನೀಡಿದ ಸಮಯವಿದು. ತಾಯಿಯ ಆಗಮನದ ಖುಷಿಯನ್ನು ಆಚರಿಸೋಣ. ಉತ್ತಮ ಭವಿಷ್ಯಕ್ಕಾಗಿ ಅವಳ ಆಶೀರ್ವಾದ ಪಡೆಯೋಣ. ಸರ್ವರಿಗೂ ನವರಾತ್ರಿ ಶುಭಾಶಯಗಳು

ಕತ್ತಲೆಯನ್ನು ಹೊಡೆದೋಡಿಸುವ ಬೆಳಕಾಗಿ ಪ್ರತಿದಿನ ಸೂರ್ಯ ಉದಯಿಸಿದಂತೆಯೇ, ದುರ್ಗೆಯ ಆಶೀರ್ವಾದದ ಪ್ರಭೆ ಸದಾ ನಿಮ್ಮ ಬದುಕಿನ ಕಷ್ಟಗಳನ್ನು ಹೊಡೆದೋಡಿಸುವ ಬೆಳಕನ್ನು ತರಲಿ, ಶಾಶ್ವತವಾದ ನೆಮ್ಮದಿ ನಿಮ್ಮದಾಗಲಿ. ಸರ್ವರಿಗೂ ನವರಾತ್ರಿ ಹಬ್ಬದ ಶುಭಾಶಯಗಳು

ನವರಾತ್ರಿಯ ಈ ಪವಿತ್ರ ಒಂಬತ್ತು ಶುಭ ದಿನಗಳು ನಿಮ್ಮ ಜೀವನಕ್ಕೆ ಅಪಾರ ಸಂತೋಷ ಮತ್ತು ಶಾಂತಿಯನ್ನು ತರಲಿ. ನವದುರ್ಗೆಯರು ನಿಮ್ಮ ಜೀವನದ ಎಲ್ಲಾ ಅಡೆತಡೆಗಳನ್ನು ನಿವಾರಿಸಲಿ. ನಿಮ್ಮ ಇಷ್ಟಾರ್ಥಗಳೆಲ್ಲಾ ಈಡೇರಲಿ. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಖುಷಿಯ ನವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು

ನವರಾತ್ರಿ ದಸರಾ ಹಬ್ಬದ ಶುಭಾಶಯಗಳು [Happy Navaratri Wishes / Quotes / Messages / Greetings / Status in Kannada] ನವರಾತ್ರಿ ದಸರಾ ಹಬ್ಬದ ಶುಭಾಶಯಗಳು [Happy Navaratri Wishes / Quotes / Messages / Greetings / Status in Kannada] Reviewed by RK on ಅಕ್ಟೋಬರ್ 12, 2021 Rating: 5

ಕಾಮೆಂಟ್‌ಗಳಿಲ್ಲ:

Submit Your Joke

ಹೆಸರು

ಇಮೇಲ್ *

ಸಂದೇಶ *

Blogger ನಿಂದ ಸಾಮರ್ಥ್ಯಹೊಂದಿದೆ.