ಯಾರಿಗೆ ಯಾರುಂಟು ಎರವಿನ ಸಂಸಾರ [ Yaarige Yaaruntu Eravina Samsara]

Yaarige Yaaruntu Eravina Samsara

ಚಿತ್ರ: ಗಾಳಿ ಗೋಪುರ
ರಚನೆ: ಪುರಂದರದಾಸ
ಸಂಗೀತ: ಟಿ ಜಿ ಲಿಂಗಪ್ಪ
ಗಾಯಕ: ಘಂಟಸಾಲ

ಯಾರಿಗೆ ಯಾರುಂಟು ಎರವಿನ ಸಂಸಾರ
ನೀರ ಮೇಲಣ ಗುಳ್ಳೆ ನಿಜವಲ್ಲಾ ಹರಿಯೇ

|| ಯಾರಿಗೆ ಯಾರುಂಟು ಎರವಿನ ಸಂಸಾರ
ನೀರ ಮೇಲಣ ಗುಳ್ಳೆ ನಿಜವಲ್ಲಾ ಹರಿಯೇ
ಯಾರಿಗೆ ಯಾರು...||

ಬಾಯಾರಿತು ಎಂದು ಬಾವಿ ನೀರಿಗೆ ಹೋದೆ
ಬಾವಿ ಜಲ ಬತ್ತಿ ಬರಿದಾಯ್ತೊ ಹರಿಯೇ
ಬಾಯಾರಿತು ಎಂದು ಬಾವಿ ನೀರಿಗೆ ಹೋದೆ
ಬಾವಿ ಜಲ ಬತ್ತಿ ಬರಿದಾಯ್ತೊ ಹರಿಯೇ
ಬಿಸಿಲಾ ತಾಳದೆ ಮರದ ನೆರಳಿಗೆ ಹೋದೆ
ಮರ ಬಗ್ಗಿ ಶಿರದ ಮೇಲೆ ಎರಗಿತೋ ಹರಿಯೇ

|| ಯಾರಿಗೆ ಯಾರುಂಟು ಎರವಿನ ಸಂಸಾರ
ನೀರ ಮೇಲಣ ಗುಳ್ಳೆ ನಿಜವಲ್ಲಾ ಹರಿಯೇ
ಯಾರಿಗೆ ಯಾರು...||

ಅಡವಿಲಿ ಮನೆ ಮಾಡಿ ಗಿಡಕೆ ತೊಟ್ಟಿಲ ಕಟ್ಟೆ
ತೊಟ್ಟಿಲಿನ ಶಿಶುವೇ ಮಾಯವಾಯಿತೋ ಹರಿಯೇ
ಅಡವಿಲಿ ಮನೆ ಮಾಡಿ ಗಿಡಕೆ ತೊಟ್ಟಿಲ ಕಟ್ಟೆ
ತೊಟ್ಟಿಲಿನ ಶಿಶುವೇ ಮಾಯವಾಯಿತೋ ಹರಿಯೇ
ತಂದೆ ಶ್ರೀಪುರಂದರ ವಿಠ್ಠಲನಾರಾಯಣ
ತಂದೆ ಶ್ರೀಪುರಂದರ ವಿಠ್ಠಲನಾರಾಯಣ
ಮರೆಯದೇ ಎನ್ನನು ನೀನೇ ಸಲಹೋ ಹರಿಯೇ

|| ಯಾರಿಗೆ ಯಾರುಂಟು ಎರವಿನ ಸಂಸಾರ
ನೀರ ಮೇಲಣ ಗುಳ್ಳೆ ನಿಜವಲ್ಲಾ ಹರಿಯೇ
ಯಾರಿಗೆ ಯಾರು...
ಆ.....ಆ......ಆ.....ಆ.......ಹ್ಂ ಹ್ಂ ಹ್ಂ…||a
ಯಾರಿಗೆ ಯಾರುಂಟು ಎರವಿನ ಸಂಸಾರ [ Yaarige Yaaruntu Eravina Samsara] ಯಾರಿಗೆ ಯಾರುಂಟು ಎರವಿನ ಸಂಸಾರ [ Yaarige Yaaruntu Eravina Samsara] Reviewed by RK on ಸೆಪ್ಟೆಂಬರ್ 19, 2021 Rating: 5

ಕಾಮೆಂಟ್‌ಗಳಿಲ್ಲ:

Submit Your Joke

ಹೆಸರು

ಇಮೇಲ್ *

ಸಂದೇಶ *

Blogger ನಿಂದ ಸಾಮರ್ಥ್ಯಹೊಂದಿದೆ.