ಈ ದೇಹದಿಂದ ದೂರನಾದೆ ಏಕೆ ಆತ್ಮನೆ ? [Ee Dehadinda Dooranaade Eke Athmane]

Ee Dehadinda Dooranaade Eke Athmane

ಚಿತ್ರ: ಓಹಿಲೇಶ್ವರ
ರಚನೆ: ವಿಜಯ ನಾರಸಿಂಹ 
ಸಂಗೀತ: ಜಿ ಕೆ ವೆಂಕಟೇಶ್
ಗಾಯಕರು: ಘಂಟಸಾಲ

ಹೇ ಶಂಕರಾ.....ದಯಾನಿಧೇ.......

ಈ ದೇಹದಿಂದ ದೂರನಾದೆ ಏಕೆ ಆತ್ಮನೆ ?
ಈ ಸಾವು ನ್ಯಾಯವೆ ?, ಈ ಸಾವು ನ್ಯಾಯವೆ ?
ಆಧಾರ ನೀನೆಂದು ಈ ಲೋಕ ನಂಬಿದೆ

|| ಈ ದೇಹದಿಂದ ದೂರನಾದೆ ಏಕೆ ಆತ್ಮನೆ ?..||

ತಾಯಿ ಹಾಲು ವಿಷವದಾಗೆ ನ್ಯಾಯವೆಲ್ಲಿದೆ
ಕಾಮದೇವ ಸಾವು ತರಲು ಎಲ್ಲಿ ರಕ್ಷಣೆ
ತಾಯಿ ಹಾಲು ವಿಷವದಾಗೆ ನ್ಯಾಯವೆಲ್ಲಿದೆ
ಕಾಮದೇವ ಸಾವು ತರಲು ಎಲ್ಲಿ ರಕ್ಷಣೆ
ಯಾವ ಪಾಪಕೆ ಸಾವು ಕಾಡಿತೊ
ಪರಮಾತ್ಮ ನ್ಯಾಯ ಬೇಡವವೇ,
ಈ ಸಾವು ನ್ಯಾಯವೆ , ಈ ಸಾವು ನ್ಯಾಯವೆ
ಆಧಾರ ನೀನೆಂದು ಈ ಲೋಕ ನಂಬಿದೆ

|| ಈ ದೇಹದಿಂದ ದೂರನಾದೆ ಏಕೆ ಆತ್ಮನೆ ?..||

ಸೇವೆಗಾಗಿ ಕಾದ ಹೂವು ಕಸವ ಸೇರಿತೆ
ಬಾಳಿನಾಸೆ ಚಿಗುರಿನಲ್ಲೆ ಬಾಡಿ ಹೋಯಿತೆ
ಸೇವೆಗಾಗಿ ಕಾದ ಹೂವು ಕಸವ ಸೇರಿತೆ
ಬಾಳಿನಾಸೆ ಚಿಗುರಿನಲ್ಲೆ ಬಾಡಿ ಹೋಯಿತೆ
ಏನು ತಪ್ಪಿದೆ ಹೇಳಬಾರದೆ
ಸರಿಯೇನು ಮೌನಾವೇಕಿದು
ಈ ಸಾವು ನ್ಯಾಯವೆ, ಈ ಸಾವು ನ್ಯಾಯವೆ
ಆಧಾರ ನೀನೆಂದು ಈ ಲೋಕ ನಂಬಿದೆ

|| ಈ ದೇಹದಿಂದ ದೂರನಾದೆ ಏಕೆ ಆತ್ಮನೆ ?..||

ಶಿವನಾಮ ಮಂತ್ರವೊಂದೆ ಅಮರ ಜೀವಿಗೆ
ಪರಮೇಶ ಪ್ರಾಣ ಜ್ಯೊತಿ ಮರಳಿ ತಾರೆಯಾ
ಮರಳಿ ತಾರೆಯಾ, ಮರಳಿ ತಾರೆಯಾ
ಪರಮೇಶ ಪ್ರಾಣ ಜ್ಯೊತಿ ಮರಳಿ ತಾರೆಯಾ
ಮರಳಿ ತಾರೆಯಾ

|| ಈ ದೇಹದಿಂದ ದೂರನಾದೆ ಎಕೆ ಆತ್ಮನೆ
ಈ ಸಾವು ನ್ಯಾಯವೆ….||
ಈ ದೇಹದಿಂದ ದೂರನಾದೆ ಏಕೆ ಆತ್ಮನೆ ? [Ee Dehadinda Dooranaade Eke Athmane] ಈ ದೇಹದಿಂದ ದೂರನಾದೆ ಏಕೆ ಆತ್ಮನೆ ? [Ee Dehadinda Dooranaade Eke Athmane] Reviewed by RK on ಸೆಪ್ಟೆಂಬರ್ 19, 2021 Rating: 5

ಕಾಮೆಂಟ್‌ಗಳಿಲ್ಲ:

Submit Your Joke

ಹೆಸರು

ಇಮೇಲ್ *

ಸಂದೇಶ *

Blogger ನಿಂದ ಸಾಮರ್ಥ್ಯಹೊಂದಿದೆ.