ಚಿನ್ನದ ಮಲ್ಲಿಗೆ ಹೂವೆ [Chinnada Mallige Hoove]

Chinnada Mallige Hoove


ಚಿತ್ರ : ಹುಲಿಯ ಹಾಲಿನ ಮೇವು
ರಚನೆ : ಗೀತಪ್ರಿಯ
ಸಂಗೀತ : ಜಿ. ಕೆ. ವೆಂಕಟೇಶ್
ಗಾಯಕ/ನಟ : ಡಾ. ರಾಜಕುಮಾರ್, ಎಸ್. ಜಾನಕಿ


ಚಿನ್ನದ ಮಲ್ಲಿಗೆ ಹೂವೆ, ಬಿಡು ನೀ, ಬಿಂಕವ ಚಲುವೆ
ನಿನ್ನ ಒಲವು ಬೇಕೆಂದು ಬಳಿಗೆ ಬಂದಾಗ, ಛಲವು, ನನ್ನಲ್ಲಿ ಏಕೆ, ಓ ।।2।।
ಚಿನ್ನದ ಮಲ್ಲಿಗೆ ಹೂವೆ, ಬಿಡು ನೀ, ಬಿಂಕವ ಚಲುವೆ

ಮಾತಲ್ಲೆ ಜೇನು ತುಂಬಿ, ನೂರೆಂಟು ಹೇಳುವೇ
ನನಗಿಂತ ಚೆಲುವೆ ಬರಲು, ನೀ ಹಿಂದೆ ಓಡುವೇ
ನಿನ್ನನ್ನು ಕಂಡ ಕಣ್ಣು, ಬೇರೇನು ನೋಡದಿನ್ನು ।2।
ನಿನಗಾಗಿಯೇ, ಬಾಳುವೇ, ಇನ್ನು ನಾನು

ಹುಣ್ಣಿಮೆ ದುಂಬಿಯೆ ಇನ್ನು, ನಿನ್ನ, ನಂಬೆನು ನಾನು
ನನ್ನ ನೆನಪು ಬಂದಾಗ, ಮೊಗವ ಕಂಡಾಗ, ಒಲವು ಬೇಕೆಂದು ಬರುವೆ, ಏ
ಹುಣ್ಣಿಮೆ ದುಂಬಿಯೆ ಇನ್ನು, ನಿನ್ನ ನಂಬೆನು ನಾನು

ಆ ಸೂರ್ಯ ಚಂದ್ರ ಸಾಕ್ಷಿ, ತಂಗಾಳಿ ಸಾಕ್ಷಿಯೂ
ಎಂದೆಂದು ಬಿಡದಾ ಬೆಸುಗೆ, ಈ ನಮ್ಮ ಪ್ರೀತಿಯೂ
ಬಂಗಾರದಂಥ ನುಡಿಯ, ಸಂಗಾತಿಯಲ್ಲಿ ನುಡಿದು ।2।
ಆನಂದದ, ಕಂಬನಿ, ತಂದೆ ನೀನು

ಚಿನ್ನದ ಮಲ್ಲಿಗೆ ಹೂವೆ, ಬಿಡು ನೀ, ಬಿಂಕವ ಚಲುವೆ
ಹೆ: ಹುಣ್ಣಿಮೆ ದುಂಬಿಯೆ ಇನ್ನು, ನಿನ್ನ ನಂಬೆನು ನಾನು
ನಿನ್ನ ಒಲವು ಬೇಕೆಂದು ಬಳಿಗೆ ಬಂದಾಗ, ಛಲವು, ನನ್ನಲ್ಲಿ ಏಕೆ, ಓ
ಚಿನ್ನದ ಮಲ್ಲಿಗೆ ಹೂವೆ, ಬಿಡು ನೀ, ಬಿಂಕವ ಚಲುವೆ
ಚಿನ್ನದ ಮಲ್ಲಿಗೆ ಹೂವೆ [Chinnada Mallige Hoove] ಚಿನ್ನದ ಮಲ್ಲಿಗೆ ಹೂವೆ [Chinnada Mallige Hoove] Reviewed by RK on ಸೆಪ್ಟೆಂಬರ್ 02, 2021 Rating: 5

ಕಾಮೆಂಟ್‌ಗಳಿಲ್ಲ:

Submit Your Joke

ಹೆಸರು

ಇಮೇಲ್ *

ಸಂದೇಶ *

Blogger ನಿಂದ ಸಾಮರ್ಥ್ಯಹೊಂದಿದೆ.