ಕನ್ನಡ ಶಿಶು ಪ್ರಾಸಗಳು [Kannada Nursery Rhymes]

ಪುಟ್ಟದೊಂದು ಸ್ಲೇಟು
ಬಳಪದೊಂದು ಗೀಟು
ಬರೆಯಲು ಬರದೇ ಹೋದರೆ
ಕಯ್ಯ ಮೇಲೊಂದ್ ಏಟು

ಅಪ್ಪ ಕೊಟ್ಟ ಕಾಸು 
ಅಮ್ಮ ಕೊಟ್ಟ ತಿಂಡಿ 
ಸ್ಕೂಲ ಮುಂದೆ ಗೇಟು 
ಅಲ್ಲಿ ಬಿದ್ದರೇಟು

ಬಾ ಇಲ್ಲಿ ಮರಿ 
ಕೊಬ್ಬರಿಯನ್ನು ತುರಿ 
ಮೆಣಸಿನ ಕಾಯಿ ಮುರಿ 
ಕಡಲೆಕಾಯಿ ಹುರಿ 
ಬೇಗ ನನ್ನ ಕರಿ 

ಅಳಿಲೆ ಅಳಿಲೆ ಚಿಂ ಚಿಂ ಅಳಿಲೆ
ಮರದಿಂಡ್ ಇಳಿದುಬಾ ಬಾ ನಲಿದು
ಸಕ್ಕರೆ ಬೆಲ್ಲಚಕ್ಕುಲಿಯೆಲ್ಲ
ಬಂದರೆಕೊಡುವೆ ಇಲ್ಲವೆತಿನುವೆ

ಬಾರೋ ಬೇಗ ಹಾಕೋ ಲಾಗ
ಬಾರೋ ಬೇಗ ಹಾಕೋ ಲಾಗ

ತೋಟಕೆ ಹೋಗೋ ತಿಮ್ಮ
ತೋಳ ಬಂದೀತಮ್ಮ
ಹಸು ಮೈಸೋ ತಿಮ್ಮ
ಹಸು ಹಾದೀತಮ್ಮ

ಓಲೆ ಉರಿಸೋ ತಿಮ್ಮ
ಉರಿ ಸುಟ್ಟೀತಮ್ಮ
ಪಾಠ ಬರೆಯೋ ತಿಮ್ಮ
ಬಳಪ ಇಲ್ಲ ಅಮ್ಮ

ನೀರು ಸೇದೋ ತಿಮ್ಮ
ಕೈಯ್ಯಿ ನೋವು ಅಮ್ಮ
ಕಾವಲಿ ತಾರೋ ತಿಮ್ಮ
ಕಾಲು ನೋವು ಅಮ್ಮ

ಹೂವು ಬಿಡಿಸೊ ತಿಮ್ಮ
ಹಾವು ಬಂದೀತಮ್ಮ
ಊಟಕೆ ಬಾರೋ ತಿಮ್ಮ
ಓಡಿ ಬಂದೆನಮ್ಮ

ಅವಲಕ್ಕಿ ಪವಲಕ್ಕಿ 
ಕಾಂಚಣ ಮಿಣಮಿಣ 
ಡಾಂ ಡೂಮ್ ಡಸ್ ಪುಸ್ 
ಕೊಯ್ಯ್ ಪಟಾರ್ 

ಆನೆ ಬಂತೊಂದ್ ಆನೆ..
ಯಾವೂರ್ ಆನೆ…
ಬಿಜಾಪುರದಾನೇ..
ಇಲ್ಲಿಗ್ಯಾಕೆ ಬಂತು..
ಹಾದಿ ತಪ್ಪಿ ಬಂತೂ..
ಬಚ್ಚಿಲಾಗ ಹೋಯ್ತು..
ಬೋರೆಕಾಯಿ ತಿಂತು..
ಮಾಮನ ಮನೆಗೆ ಹೋಯ್ತು..
ಮಾವಿನ ಕಾಯಿ ತಿಂತು..
ಅತ್ತಿ ಮನೆಗೆ ಹೋಯ್ತು..
ಅತ್ತಿ ಕಾಯಿ ತಿಂತು..
ಆನೆ ಬಂತೊಂದ್ ಆನೆ.

ಉಂಡಾಡಿ ಗುಂಡ 
ಅತ್ತೆ ಮನೆಗೆ ಹೋದ 
ಹತ್ತು ಲಾಡು ತಿಂದ 
ಹೊಟ್ಟೆ ನೋವು ಎಂದ 
ಅಮ್ಮ ಬೆಣ್ಣೆ ಕೊಟ್ಟಳು 
ಇನ್ನು ಸ್ವಲ್ಪ ಎಂದ 
ಅಪ್ಪ ದೊಣ್ಣೆ ತಂದನು 
ಕೈ ಕಟ್ಟ್ ಬಾಯ್ ಮುಚ್ಚ್ 

ಬೆಕ್ಕು ಬಂದಿತು 
ಕಬ್ಬು ತಂದಿತು 
ಗಾಣ ಹೂಡಿತು 
ರಸವ ಹಿಂಡಿತು 
ಹಾಲು ಕುಡಿಯಿತು 
ಹೊಟ್ಟೆ ಉಬ್ಬಿತು 
ಸತ್ತು ಬಿದ್ದಿತು 

ಜಣ ಜಣ ಜಣ
ಜೇಬು ತುಂಬ ಹಣ
ಮೇಲಕೆತ್ತಿ ಬಿಡಲು ಸದ್ದು 
ಟನ್ ಟನ್ ಟಣ
ಸುತ್ತ ಹಸಿರು ವನ 
ನಡುವೆ ಮೇವ ದನ
ಗೊಲ್ಲನೊಬ್ಬ ಊದುತಿದ್ದ 
ತಾನ ನಾನ ನಾನ

ಡೊಳ್ಳು ಹೊಟ್ಟೆ ಗುಂಡ
ತಿನ್ನೋದ್ರಲ್ಲಿ ಬಂಡ,
ಕೇಳಿ ಕೇಳಿ ಹಾಕಿಸ್ಕೊಂಡು,
ತಿಂದ ನೂರು ಬೋಂಡ..

ಊಟ ಅವನಿಗೆ ಇಷ್ಟ,
ಪಾಠ ಅಂದ್ರೆ ಕಷ್ಟ,
ಕ್ಲಾಸ್ಸಿನಲ್ಲಿ ಗೊರಕೆ ಹೊಡೆದು ಭಾರಿ ಗುಂಡ ಆದ.
ಮಳೆ ಬಂತು ಮಳೆ ಕೊಡೆ ಹಿಡಿದು ನಡೆ,
ದಾರಿಯಲ್ಲಿ ಜಾರಿಬಿದ್ದು ಬಟ್ಟೆಯಲ್ಲ ಕೊಳೆ,
ಬಿಸಿಲು ಬಂತು ಬಿಸಿಲು ಕೋಟು ಟೋಪಿ ತೆಗೆ,
ಬಾವಿಯಲ್ಲಿ ನೀರು ಸೇದಿ ಸೋಪು ಹಾಕಿ ಒಗೆ.
ಕನ್ನಡ ಶಿಶು ಪ್ರಾಸಗಳು [Kannada Nursery Rhymes] ಕನ್ನಡ ಶಿಶು ಪ್ರಾಸಗಳು [Kannada Nursery Rhymes] Reviewed by RK on ಆಗಸ್ಟ್ 16, 2021 Rating: 5

ಕಾಮೆಂಟ್‌ಗಳಿಲ್ಲ:

Submit Your Joke

ಹೆಸರು

ಇಮೇಲ್ *

ಸಂದೇಶ *

Blogger ನಿಂದ ಸಾಮರ್ಥ್ಯಹೊಂದಿದೆ.