ರಚನೆ: ಬಿ. ಎಸ್. ಲಕ್ಷ್ಮಣ ರಾವ್
ಅಮ್ಮ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು
ಮಿಡುಕಾಡುತಿರುವೆ ನಾನು|
ಕಡಿಯಲೊಲ್ಲೆ ನೀ ಕರುಳ ಬಳ್ಳಿ ಒಲವೂಡುತಿರುವ ತಾಯೆ,
ಬಿಡದ ಭುವಿಯ ಮಾಯೆ||
ನಿನ್ನ ರಕ್ಷೆ ಗೂಡಲ್ಲಿ ಬೆಚ್ಚಗೆ ಅಡಗಲಿ ಎಷ್ಟು ದಿನ ,
ದೂಡು ಹೊರಗೇ ನನ್ನ|
ಓಟ ಕಲಿವೆ ಒಳನೋಟ ಕಲಿವೆ ನಾ ಕಲಿವೆ ಊರ್ಧ್ವ ಗಮನ
ಓ ಅಗಾಧ ಗಗನ||1||
ಮೇಲೆ ಹಾರಿ ನಿನ್ನಾ ಸೆಳೆತ ಮೀರಿ ನಿರ್ಭಾರ ಸ್ಥಿತಿಗೆ ತಲುಪಿ,
ಬ್ರಹ್ಮಾಂಡವನ್ನೇ ಬೆದಕಿ|
ಇಂಧನ ತೀರಲು ಬಂದೇ ಬರುವೆನು ಮತ್ತೆ ನಿನ್ನ ತೊಡೆಗೆ
ಮೂರ್ತ ಪ್ರೇಮದೆಡೆಗೆ||2||

ಅಮ್ಮ ನಿನ್ನ ಎದೆಯಾಳದಲ್ಲಿ [Amma Ninna Edeyaaladalli]
Reviewed by RK
on
ಆಗಸ್ಟ್ 13, 2021
Rating:
ಕಾಮೆಂಟ್‌ಗಳಿಲ್ಲ: