ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ [Amma Naanu Devarane Benne Kaddillamma]

ರಚನೆ: ಡಾ. ಎಚ್.ಎಸ್. ವೆಂಕಟೇಶ್ ಮೂರ್ತಿ

ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ
ಎಲ್ಲ ಸೇರಿ ನನ್ನ ಬಾಯಿಗೆ, ಬೆಣ್ಣೆಯ ಮೆತ್ತಿದರಮ್ಮ
ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ

ನೀನೆ ನೋಡು ಬೆಣ್ಣೆ ಗಡಿಗೆ, ಸೂರಿನ ನಿಲುವಲ್ಲಿ
ಹೇಗೆ ತಾನೆ ತೆಗೆಯಲಿ ಅಮ್ಮ, ನನ್ನ ಪುಟ್ಟ ಕೈಗಳಿಂದ ||ಅಮ್ಮ ನಾನು||

ಶಾಮ ಹೇಳಿದಾ…
ಶಾಮ ಹೇಳಿದ ಬೆಣ್ಣೆ ಮೆತ್ತಿದ ತನ್ನ ಬಾಯಿ ವರಸುತ್ತ
ಬೆಣ್ಣೆ ಮೆತ್ತಿದಾ ಕೈಯ, ಬೆನ್ನ ಹಿಂದೆ ಮರೆಸುತ್ತಾ ||ಅಮ್ಮ ನಾನು||

ಎತ್ತಿದ ಕೈಯ ಕಡೆಗೊಲನ್ನ, ಮೂಲೆಲಿಟ್ಟು ನಕ್ಕಳು ಗೋಪಿ
ಸೂರದಾಸ ಪ್ರಿಯ ಶಾಮನಾ, ಮುತ್ತಿಟ್ಟು ನಕ್ಕಳು ಗೋಪಿ ||ಅಮ್ಮ ನಾನು||
ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ [Amma Naanu Devarane Benne Kaddillamma] ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ [Amma Naanu Devarane Benne Kaddillamma] Reviewed by RK on ಆಗಸ್ಟ್ 13, 2021 Rating: 5

ಕಾಮೆಂಟ್‌ಗಳಿಲ್ಲ:

Submit Your Joke

ಹೆಸರು

ಇಮೇಲ್ *

ಸಂದೇಶ *

Blogger ನಿಂದ ಸಾಮರ್ಥ್ಯಹೊಂದಿದೆ.