ಬಿಟ್ಕಾಯಿನ್ ಎನ್ನುವುದು ಒಂದು ರೀತಿಯ ಡಿಜಿಟಲ್ ಕರೆನ್ಸಿಯಾಗಿದ್ದು, ಅದನ್ನು ಎರಡು ವ್ಯಕ್ತಿಗಳ ನಡುವೆ ಖರೀದಿ ಹಾಗು ಮಾರಾಟ ಮಾಡಬಹುದಾಗಿದ್ದು, ಇಂಟರ್ನೆಟ್ ಮೂಲಕ ಸುರಕ್ಷಿತವಾಗಿ ವರ್ಗಾಯಿಸಬಹುದಾಗಿದೆ. ಅದನ್ನು ಮುಟ್ಟಲು ಮತ್ತು ನೋಡಲು ಸಾಧ್ಯವಿಲ್ಲ, ಆದರೆ ಅದನ್ನು ಅಂತರ್ಜಾಲದ (Electronically) ಮೂಲಕ ವ್ಯಾಪಾರ ಮಾಡಬಹುದು. ನಾವು ಅದನ್ನು ನಮ್ಮ ಮೊಬೈಲ್, ಕಂಪ್ಯೂಟರ್ ಅಥವಾ ಯಾವುದೇ ಇತರ ಸ್ಟೋರೇಜ್ ಮಾಧ್ಯಮದಲ್ಲಿ ವರ್ಚುವಲ್ ಕರೆನ್ಸಿಯಾಗಿ ಸಂಗ್ರಹಿಸಬಹುದು. ಬಿಟ್ ಕಾಯಿನ್ ಚಿನ್ನ, ಬೆಳ್ಳಿ ಮತ್ತು ಇತರ ಕೆಲವು ರೀತಿಯ ಉತ್ತಮವಾದ ಹೂಡಿಕೆಗಳಂತೆ ಹಣದ ಮೌಲ್ಯವನ್ನು ಸಂಗ್ರಹಿಸಿಡುವಲ್ಲಿ ಸಹಕಾರಿಯಾಗಿದೆ. ಉತ್ಪನ್ನಗಳು ಮತ್ತು ಸೇವೆಗಳನ್ನು ಖರೀದಿಸಲು ಹಾಗೂ ಪಾವತಿಗಳನ್ನು ಮತ್ತು ವಿನಿಮಯ ಮೌಲ್ಯಗಳನ್ನು ವಿದ್ಯುನ್ಮಾನವಾಗಿ ಮಾಡಲು ಇದನ್ನು ಬಳಸಬಹುದು. ಇದು ವಿಶ್ವದ ಅತ್ಯಂತ ಜನಪ್ರಿಯ ಕ್ರಿಪ್ಟೋ ಕರೆನ್ಸಿ.
ಸತೋಶಿ ನಕಾಮೊಟೊ 2008 ರಲ್ಲಿ ಬಿಟ್ ಕಾಯಿನ್ ಅನ್ನು ಪರಿಚಯಿಸಿದರು. ಬಿಟ್ ಕಾಯಿನ್ ಕ್ರಿಪ್ಟೋಕರೆನ್ಸಿ (ವರ್ಚುವಲ್ ಕರೆನ್ಸಿ), ಅಥವಾ ಡಿಜಿಟಲ್ ಕರೆನ್ಸಿಯಾಗಿದ್ದು, ಕರೆನ್ಸಿ ಘಟಕಗಳ (Currency Units) ನಿಯಂತ್ರಣ ಮತ್ತು ಉತ್ಪಾದನೆಗಾಗಿ ಕ್ರಿಪ್ಟೋಗ್ರಫಿ ನಿಯಮಗಳನ್ನು ಬಳಸುತ್ತದೆ. ಬಿಟ್ ಕಾಯಿನ್ ಕ್ರಿಪ್ಟೋ ಕರೆನ್ಸಿಯ ವ್ಯಾಪ್ತಿಗೆ ಬಿದ್ದು ಅವುಗಳಲ್ಲಿ ಮೊದಲ ಮತ್ತು ಅತ್ಯಂತ ಮೌಲ್ಯಯುತವಾದ ಕ್ರಿಪ್ಟೋ ಕರೆನ್ಸಿಯಾಗಿ ಬೆಳೆದಿದೆ. ಇದನ್ನು ಸಾಮಾನ್ಯವಾಗಿ ವಿಕೇಂದ್ರೀಕೃತ (Decentralised) ಡಿಜಿಟಲ್ ಕರೆನ್ಸಿ ಎಂದು ಕರೆಯಲಾಗುತ್ತದೆ.
ಬಿಟ್ ಕಾಯಿನ್ ಇತರ ಸಾಂಪ್ರದಾಯಿಕ ಕರೆನ್ಸಿಗಳಾದ ರೂಪಾಯಿ, ಡಾಲರ್, ಪೌಂಡ್ ಮತ್ತು ಯೂರೋಗಳಿಗಿಂತ ಭಿನ್ನವಾಗಿದೆ, ಇದನ್ನು ವಸ್ತುಗಳನ್ನು ಖರೀದಿಸಲು ಮತ್ತು ಮೌಲ್ಯಗಳನ್ನು ವಿದ್ಯುನ್ಮಾನವಾಗಿ ವಿನಿಮಯ ಮಾಡಲು ಸಹ ಬಳಸಬಹುದು. ಬಿಟ್ ಕಾಯಿನ್ ಗಳಿಗೆ ಯಾವುದೇ ಭೌತಿಕ ರೂಪವಿಲ್ಲ. ನೀವು ಯಾರಿಗಾದರೂ ಬಿಟ್ಕಾಯಿನ್ ಕಳುಹಿಸಿದಾಗ ಅಥವಾ ಏನನ್ನಾದರೂ ಖರೀದಿಸಲು ಬಿಟ್ಕಾಯಿನ್ ಬಳಸಿದಾಗ, ನೀವು ಬ್ಯಾಂಕ್, ಕ್ರೆಡಿಟ್ ಕಾರ್ಡ್ ಅಥವಾ ಯಾವುದೇ ಮೂರನೇ ವ್ಯಕ್ತಿಗಳನ್ನು ಬಳಸಬೇಕಾಗಿಲ್ಲ. ಬದಲಾಗಿ, ನೀವು ಬಿಟ್ಕಾಯಿನ್ ಅನ್ನು ನೇರವಾಗಿ ಇನ್ನೊಂದು ವ್ಯಕ್ತಿಗೆ ಸುರಕ್ಷಿತವಾಗಿ ಮತ್ತು ತಕ್ಷಣವೇ ಇಂಟರ್ನೆಟ್ ಮೂಲಕ ಕಳುಹಿಸಬಹುದು.
ಬಿಟ್ಕಾಯಿನ್ ಎಂದರೇನು? [What is bitcoin? Explained in Kannada]
Reviewed by RK
on
ಸೆಪ್ಟೆಂಬರ್ 25, 2021
Rating:
Reviewed by RK
on
ಸೆಪ್ಟೆಂಬರ್ 25, 2021
Rating:

ಕಾಮೆಂಟ್ಗಳಿಲ್ಲ: