ಕೋಡಗನ ಕೋಳಿ ನುಂಗಿತ್ತ, ನೋಡವ್ವ ತಂಗಿ [Kodagana Koli Nungittha]

ರಚನೆ: ಸಂತ ಶಿಶುನಾಳ ಶರೀಫ

ಕೋಡಗನ ಕೋಳಿ ನುಂಗಿತ್ತಾ
ನೋಡವ್ವ ತಂಗಿ
ಕೋಡಗನ ಕೋಳಿ ನುಂಗಿತ್ತಾ ||ಪಲ್ಲವಿ||

ಆಡು ಆನೆಯ ನುಂಗಿ
ಗೋಡೆ ಸುಣ್ಣವ ನುಂಗಿ
ಆಡಲು ಬಂದ ಪಾತರದವಳ ಮದ್ದಳೆ ನುಂಗಿತ್ತ, ತಂಗಿ ||ಪಲ್ಲವಿ||

ಒಳ್ಳು ಒನಕೆಯ ನುಂಗಿ
ಕಲ್ಲು ಗೂಟವ ನುಂಗಿ
ಮೆಲ್ಲಲು ಬಂದ ಮುದುಕಿಯನ್ನೇ ನೆಲ್ಲು ನುಂಗಿತ್ತಾ, ತಂಗಿ ||ಪಲ್ಲವಿ||

ಹಗ್ಗ ಮಗ್ಗವ ನುಂಗಿ
ಮಗ್ಗವ ಲಾಳಿ ನುಂಗಿ
ಮಗ್ಗದಲಿರುವ ಅಣ್ಣನನ್ನೇ ಮಣಿಯೂ ನುಂಗಿತ್ತಾ, ತಂಗಿ ||ಪಲ್ಲವಿ||

ಗುಡ್ಡ ಗವಿಯನ್ನು ನುಂಗಿ
ಗವಿಯು ಇರುವೆಯ ನುಂಗಿ
ಗೋವಿಂದ ಗುರುವಿನ ಪಾದ ನನ್ನನೇ ನುಂಗಿತ್ತಾ, ತಂಗಿ ||ಪಲ್ಲವಿ||


ಕೋಡಗನ ಕೋಳಿ ನುಂಗಿತ್ತ, ನೋಡವ್ವ ತಂಗಿ [Kodagana Koli Nungittha] ಕೋಡಗನ ಕೋಳಿ ನುಂಗಿತ್ತ, ನೋಡವ್ವ ತಂಗಿ [Kodagana Koli Nungittha] Reviewed by RK on ಆಗಸ್ಟ್ 13, 2021 Rating: 5

ಕಾಮೆಂಟ್‌ಗಳಿಲ್ಲ:

Submit Your Joke

ಹೆಸರು

ಇಮೇಲ್ *

ಸಂದೇಶ *

Blogger ನಿಂದ ಸಾಮರ್ಥ್ಯಹೊಂದಿದೆ.