ಹಿಂದುಸ್ಥಾನವು ಎಂದೂ ಮರೆಯದ [Hindustanavu Endu Mareyada]

Hindustanavu Endu Mareyada

ಚಲನಚಿತ್ರ: ಅಮೃತ ಘಳಿಗೆ
ಗಾಯಕಿ: ಬಿ. ಆರ್. ಚಾಯಾ

ಸಾಹಿತ್ಯ | Lyrics
ಹಿಂದುಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು ||
ಕನ್ನಡ ಹಿರಿಮೆಯ ಮಗನಾಗು, ಕನ್ನಡ ನುಡಿಯಾ ಸಿರಿಯಾಗು
ಹಿಂದುಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು

ಭಾರತ ದೇಶದ ಬಡವರ ಕಂಬನಿ ಒರೆಸುವ ನಾಯಕ ನೀನಾಗು ||
ಭಾರತೀಯರ ವಿಶ್ವ ಪ್ರೇಮವ ಮೆರೆಸುವ ಜ್ಞಾನಿ ನೀನಾಗು
ಭಾರತೀಯರ ಭವ್ಯ ಭವಿಷ್ಯವ ಬೆಳಗುವ ವಿಜ್ಞಾನಿ ನೀನಾಗು, ಬೆಳಗುವ ವಿಜ್ಞಾನಿ ನೀನಾಗು

ಹಿಂದುಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು |

ಭೂಮಂಡಲದ ಹಾಹಾಕಾರವ ನೀಗುವ ಶಕ್ತಿಯು ನೀನಾಗು ||
ಮಾರಕಶಕ್ತಿಯ ದೂರಗೈಯುವ ವೀರಶಿರೋಮಣಿ ನೀನಾಗು
ಬ್ರಮ್ಹಾಂಡವನೇ ಬೆಳಗುವ ಶಕ್ತಿಯ ಕಾಣುವ ಯೋಗಿಯು ನೀನಾಗು, ಕಾಣುವ ಯೋಗಿಯು ನೀನಾಗು

ಹಿಂದುಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು ||
ಹಿಂದುಸ್ಥಾನವು ಎಂದೂ ಮರೆಯದ [Hindustanavu Endu Mareyada] ಹಿಂದುಸ್ಥಾನವು ಎಂದೂ ಮರೆಯದ [Hindustanavu Endu Mareyada] Reviewed by RK on ಆಗಸ್ಟ್ 12, 2021 Rating: 5

ಕಾಮೆಂಟ್‌ಗಳಿಲ್ಲ:

Submit Your Joke

ಹೆಸರು

ಇಮೇಲ್ *

ಸಂದೇಶ *

Blogger ನಿಂದ ಸಾಮರ್ಥ್ಯಹೊಂದಿದೆ.