ಬಾಳ ಒಳ್ಳೇವ್ರು ನಮ್ಮ ಮಿಸ್ಸು, ಏನ್ ಹೇಳಿದ್ರು ಎಸ್ಸೆಸ್ಸು [Bhaala Ollevru Nam missu]

ರಚನೆ: ಎನ್. ಎಸ್. ಲಕ್ಷ್ಮೀ ನಾರಾಯಣ ಭಟ್ಟ

ಬಾಳ ಒಳ್ಳೇವ್ರು ನಮ್ಮ ಮಿಸ್ಸು
ಏನ್ ಹೇಳಿದ್ರು ಎಸ್ಸೆಸ್ಸು
ನಗ್ತಾ ನಗ್ತಾ ಮಾತಾಡ್ತಾರೆ
ಸ್ಕೂಲಿಗೆಲ್ಲ ಫೇಮಸ್ಸು.

ಜಾಣಮರಿ ಅಂತಾರೆ
ಚಾಕ್ಲೇಟಿದ್ರೆ ಕೊಡ್ತಾರೆ
ಬೆನ್ನು ತಟ್ಟಿ ಕೆನ್ನೆ ಸವರಿ
ಬೆಣ್ಣೆ ಕಂದ ಅಂತಾರೆ.

ಆಟಕ್ ಬಾ ಅಂತಾರೆ
ಆಟದ್ ಸಾಮಾನ್ ಕೊಡ್ತಾರೆ
ಗೊತ್ತಿಲ್ದಂಗೆ ಆಟದ್ ಜೊತೆ
ಪಾಠಾನೂ ಕಲಿಸ್ತಾರೆ.

ನಮ್ ಜೊತೇನೆ ಆಡ್ತಾರೆ
ಕೈ ಕೈ ಹಿಡಿದು ಆಡ್ತಾರೆ
ಕೋತಿ ಕರಡಿ ಕಥೆ ಹೇಳಿ
ಸಿಕ್ಕಾಪಟ್ಟೆ ನಗಿಸ್ತಾರೆ.

ನಮ್ ಸ್ಕೂಲ್ ಅಂತಾ ಸ್ಕೂಲಿಲ್ಲ
ನಮ್ ಮಿಸ್ಸಂತ ಮಿಸ್ಸಿಲ್ಲ
ಅಮ್ಮನ್ ಹಾಗೆ ಅವರೂನು
ಬಿಟ್ ಬರಾಕೆ ಮನಸಿಲ್ಲ.

ಬಾಳ ಒಳ್ಳೇವ್ರು ನಮ್ಮ ಮಿಸ್ಸು, ಏನ್ ಹೇಳಿದ್ರು ಎಸ್ಸೆಸ್ಸು [Bhaala Ollevru Nam missu] ಬಾಳ ಒಳ್ಳೇವ್ರು ನಮ್ಮ ಮಿಸ್ಸು, ಏನ್ ಹೇಳಿದ್ರು ಎಸ್ಸೆಸ್ಸು [Bhaala Ollevru Nam missu] Reviewed by RK on ಆಗಸ್ಟ್ 13, 2021 Rating: 5

ಕಾಮೆಂಟ್‌ಗಳಿಲ್ಲ:

Submit Your Joke

ಹೆಸರು

ಇಮೇಲ್ *

ಸಂದೇಶ *

Blogger ನಿಂದ ಸಾಮರ್ಥ್ಯಹೊಂದಿದೆ.