ಬಣ್ಣದ ಬುಗುರಿ [Bannada Buguri]

ನನ್ನಯ ಬುಗುರಿ ಬಣ್ಣದ ಬುಗುರಿ
'ಗುರು ಗುರು' ಸದ್ದನು ಮಾಡುವ ಬುಗುರಿ

ಜಾಳಿಗೆ ಸುತ್ತಿ ಕೈಯನು ಎತ್ತಿ
ಬೀಸಲು ಭರದಿ ಸುತ್ತುವ ಬುಗುರಿ

ಹೊಡೆತಕೆ ಅಂಜದೆ ಕೆಚ್ಚೆದೆಯಿಂದಲಿ
'ಗಿರಿ ಗಿರಿ' ತಿರುಗುವ ಮೆಚ್ಚಿನ ಬುಗುರಿ

ಅಂಗೈ ಮೇಲೆ ಆಡುವ ಬುಗುರಿ
ಕಚಗುಳಿಯಿಕ್ಕುವ ಮೋಜಿನ ಬುಗುರಿ

ಕಾಮನ ಬಿಲ್ಲನು ಭೂಮಿಗೆ ಇಳಿಸಿ
'ಗರ ಗರ' ಸುತ್ತುವ ಬಣ್ಣದ ಬುಗುರಿ
ಬಣ್ಣದ ಬುಗುರಿ [Bannada Buguri] ಬಣ್ಣದ ಬುಗುರಿ [Bannada Buguri] Reviewed by RK on ಆಗಸ್ಟ್ 15, 2021 Rating: 5

ಕಾಮೆಂಟ್‌ಗಳಿಲ್ಲ:

Submit Your Joke

ಹೆಸರು

ಇಮೇಲ್ *

ಸಂದೇಶ *

Blogger ನಿಂದ ಸಾಮರ್ಥ್ಯಹೊಂದಿದೆ.